
ಪುರಾತಕಾಲದಿಂದಲೂ ನಮ್ಮ ಪೂರ್ವಜರು ಸ್ನಾನಕ್ಕೆ ಮತ್ತು ಬಟ್ಟೆ ಒಗೆಯುವುದಕ್ಕೆ ಬಳಸುತ್ತಿದ್ದರು ಆರೋಗ್ಯವಾಗಿ ಇರುತ್ತಿದ್ದರು ಆದರರ ಇತ್ತೀಚಿನ ದಿನಗಳಲ್ಲಿ ಕೆಮಿಕಲ್ ಯುಕ್ತ ಶಾಂಪ್,ಸೋಪ್ ಬಳಸುತ್ತಿದ್ದೇವೆ ಇದರಿಂದಾಗಿ ಆಗುವ ದುಷ್ಪರಿಣಾಮಗಳೇ ಹೆಚ್ಚು
ಸ್ನಾನಕ್ಕೆ ಶಾಂಪೂ ಬದಲು ಸೀಗೇಕಾಯಿ ಅಂಟವಾಳ ಬಳಸಿದರೆ ನಾವು ನೀರಿಗೆ ವಿಷ ಉಣಿಸುವುದ್ದನ್ನು ನಮ್ಮ ಕೈಲಾದಷ್ಟು ತಡೆಯಬಹುದು ಮತ್ತು ನಮ್ಮ ಆರೋಗ್ಯಕ್ಕೂ ಉತ್ತಮವಲ್ಲವೇ? ಇದಷ್ಟೇ ಅಲ್ಲದೆ ಒಬ್ಬ ವ್ಯಕ್ತಿ ವಾರಕ್ಕೆ ಎರಡು ಸಲ ಶಾಂಪೂ ಪೂಟ್ಟಣ (Sachet) ಬಳಸಿದರೆ ವರ್ಷಕ್ಕೆ ಕನಿಷ್ಟ ೧೦೦ ಪ್ಲಾಸ್ಟಿಕ್ ಪೂಟ್ಟಣ (Sachet) ಭೂಮಿಗೆ ಸೇರುತ್ತದೆ.
ಈಗ ನೀವೇ ಯೋಚಿಸಿ ಎಷ್ಟು ಕೋಟಿ ಜನರು ಶಾಂಪೂ ಪೂಟ್ಟಣ (Sachet) ಬಳಸಿ ಹೇಗೆ ಭೂಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆಂದು. ಇನ್ನಮೇಲಾದರೂ ಶಾಂಪೂ ಬಿಟ್ಟು ಸೀಗೇಕಾಯಿ ಅಂಟವಾಳ ಬಳಸುತ್ತೀರಲ್ಲವೇ? ಇದರಿಂದ ಗ್ರಾಮೀಣ ಭಾಗದ ರೈತರಿಗೂ ಅನುಕೂಲವಾಗುತ್ತದೆ. ರೈತರು ಬೇಲಿ ಬದುಗಳಲ್ಲಿ ಸೀಗೇಕಾಯಿ ಅಂಟವಾಳ ಬೆಳಸಿ ಆದಾಯಗಳಿಸಬಹುದು.
ಶೀಗೆ ಕಾಯಿ ಗಿಡದ ಬಗ್ಗೆ ಸ್ವಲ್ಪ ಮಾಹಿತಿ.. ಶೀಗೆಯು ಎಲ್ಲಾ ಮರಗಳ ರೀತಿ ಗಟ್ಟಿ ಇಲ್ಲ.. ಇದಕ್ಕೆ ಆಸರೆಯಾಗಿ ಇನ್ನೊಂದು ಮರ ಬೇಕೇ ಬೇಕು. ನಮ್ಮ ಕಡೆ ಹೊಂಗೆ ಮರಕ್ಕೆ ಆಸರೆಯಾಗಿ ಶೀಗೆಯನ್ನು ಬೆಳೆಯಲಾಗುತ್ತದೆ.. ಆದ್ದರಿಂದ ನೀವು ಶೀಗೆಕಾಯಿ ಉಪಯೋಗಿಸಿದರೆ ಎರಡು ಮರ ಬೆಳೆಸಿದಂತಾಗುತ್ಥದೆ.. ಆದ್ದರಿಂದ ಎಲ್ಲರೂ ಶೀಗೆಕಾಯಿಯನ್ನು ಹೆಚ್ಚು ಹೆಚ್ಚಾಗಿ ಉಪಯೋಗಿಸೋಣ..
ಸಂಗ್ರಹ ಮಾಹಿತಿ