
ಕಪ್ಪು ಅಕ್ಕಿ
ಇದನ್ನು ಮಾಯಾ ಅಕ್ಕಿ ಎನ್ನುತ್ತಾರೆ.ಚೀನಾದ ರಾಜವಂಶಸ್ಥರು ಮಾತ್ರ ಬಳಸುತ್ತಿದ್ದ ಈ ಅಕ್ಕಿಯನ್ನು ಅಲ್ಲಿ ಜನಸಾಮಾನ್ಯರು ಬಳಸುವದನ್ನು ನಿಷೇಧಿಸಿದ್ದರು.ಇತ್ತೀಚೆಗೆ ಕಪ್ಪು ಅಕ್ಕಿಯ ವಿವಿದ ತಳಿಗಳನ್ನು ಹೊರಗಿನಿಂದ ತಂದು ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲಿ ಬೆಳೆಯುತ್ತಿದ್ದಾರೆ.
ಕಪ್ಪು ದ್ರಾಕ್ಷಿ ಇತ್ಯಾದಿ ಹಣ್ಣುಗಳಲ್ಲಿರುವ anthocyanins ಎನ್ನುವ ಪೋಷಕಾಂಶಗಳು ಕಪ್ಪು ಅಕ್ಕಿಯಲ್ಲಿ ಮಾತ್ರ ವಿಫುಲವಾಗಿವೆ.ಶರೀರದ ಆರೋಗ್ಯಕ್ಕೆ ಪೂರಕವಾದ ನಾರು,ಖನಿಜಾಂಶಗಳು, ಉರಿಯೂತ ತಡೆಗಟ್ಟುವ ಪೋಷಕಾಂಶಗಳು ಕಪ್ಪು ಅಕ್ಕಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ.ಈ ಅಕ್ಕಿಯಲ್ಲಿರುವ ಆಂತೋಸಯಾನಿನ್ನು, ಕ್ಯಾನ್ಸರ್ ತಡೆಗಟ್ಟಲು, ಉರಿಯೂತ ನಿವಾರಣೆಗೆ ಅಲ್ಲದೆ ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ.ಬೊಜ್ಜು ನಿವಾರಣೆಗೆ ಮತ್ತು ಸಕ್ಕರೆ ಖಾಯಿಲೆಯ ಹತೋಟಿಗೂ ಕಪ್ಪು ಅಕ್ಕಿಯ ಅನ್ನ ಊಟ ಮಾಡುತ್ತಾರೆ.
ಚೀನಾ ಬಿಟ್ಟರೆ ನಮ್ಮ ದೇಶದ ಕೆಲವು ಕಡೆ ಮಾತ್ರ ಕಪ್ಪು ಅಕ್ಕಿ ಬೆಳೆಯುತ್ತಾರೆ.ಮಣಿಪುರದ ವಿಶೇಷ ಔತಣಕೂಟಗಳು ಕಪ್ಪು ಅಕ್ಕಿಯ ಖಾದ್ಯಗಳಿಂದ ಮಾತ್ರ ಪರಿಪೂರ್ಣಗೊಳ್ಳುತ್ತವೆ.
ಕೆಲವು ವರ್ಷಗಳ ಹಿಂದೆ, ವಿಶ್ವ ಅಹಾರ ದಿನದಂದು ಕಪ್ಪು ಅಕ್ಕಿಗೆ
” ಶ್ರೇಷ್ಠ ಆಹಾರ “ವೆಂಬ ಮನ್ನಣೆ ಸಿಕ್ಕಿದೆ.
ಅಸ್ಸಾಮಿನ ಗೌಹಾತಿಯಿಂದ ನಾವು ಕಪ್ಪು ಅಕ್ಕಿಯನ್ನು ತಂದಿದ್ದೆವು.ಕೆ.ಜಿ.ಗೆ ₹125.
ಕಪ್ಪು ಅಕ್ಕಿಯನ್ನು ಬೇಯಿಸಿದಾಗ ದಟ್ಟ ನೇರಳೆ
ಬಣ್ಣದ ,ಅತ್ಯಂತ ಸುವಾಸನಾಯುಕ್ತ ಅನ್ನವಾಗುತ್ತದೆ.ಊಟಕ್ಕೆ ಬಲು ರುಚಿ.ಪೊಂಗಲ್ ಕೂಡಾ ಚೆನ್ನಾಗಿರುತ್ತದೆ.
ಕರ್ನಾಟಕದಲ್ಲಿ ಭತ್ತ ಬೆಳೆಯುವ ಉತ್ತಮ ಭೂಮಿ ಇದೆ.ಕಪ್ಪು ಅಕ್ಕಿಗೆ ಭಾರೀ ಬೇಡಿಕೆಯಿದೆ. ಕಪ್ಪು ಭತ್ತ ಬೆಳೆದರೆ ರೈತರ ಬದುಕೂ ಹಸನಾಗಬಹುದು.
ಭತ್ತದ ಗಿಡದ ಫೋಟೋವನ್ನು ಗೂಗಲ್ಲಿಂದ ಪಡೆಯಲಾಗಿದೆ.ಯಾರ ಬಳಿಯಾದರೂ ಈ ಭತ್ತ ಇದ್ದರೆ ದಯವಿಟ್ಟು ತಿಳಿಸಿ.