ದೇವಾಲಯಗಳುಸುದ್ದಿ

ಭೀಮನ ಅಮವಾಸ್ಯೆ ಪ್ರಯುಕ್ತ ಮಹದೇಶ್ವರ ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ಚಿರತೆಯ ಆತಂಕ..!

ನಮ್ಮ ಸಂಪ್ರದಾಯದಲ್ಲಿ..ಪ್ರತಿ ಯೊಂದು ಅಮವಾಸ್ಯೆ ಪೂಜೆಗಳು ವಿಷೇಶ ಅದರಲ್ಲಿ ಭೀಮನ ಅಮವಾಸ್ಯೆ ಎಂದರೆ ಎಲ್ಲಿಲ್ಲದ ಸಂಭ್ರಮ ಸಡಗರ ಹೆಣ್ಣುಮಕ್ಕಳು ಒಳ್ಳೆಯ ಹುಡುಗ ಸಿಗಲಿ.ಅಂತ ಪೂಜೆ ಮಾಡಿದರೆ.ಹುಡುಗ ಒಳ್ಳೆಯ ಹುಡುಗಿ ಸಿಗಲಿಅಂತ ಪೂಜೆ ಮಾಡುವುದು ಸಂಪ್ರದಾಯ ವಾಗಿದೆ ಅದರಲ್ಲೂ ದೇವಸ್ಥಾನ ಗಳಲ್ಲಿ ವಿಷೇಶ ಪೂಜೆ ನಡೆಯುತ್ತದೆ.ಶ್ರೀ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಭೀಮನ ಅಮವಾಸ್ಯೆ ಯಲ್ಲಿ,ವಿಷೇಶಪೂಜೆ ಉತ್ಸವ ವಾದಿಗಳು ಜಗತ್ ಪ್ರಸಿದ್ಧಿ ಯಾಗಿದೆ ಆದರೆ ಕರೋನ ತೊಂದರೆ ಯಿಂದ ಲಾಕ್ ಡೌನ್ ಮಾಡಲಾಗಿದ್ದು ದೇವರ ದರ್ಶನಕ್ಕೆ ಭಕ್ತಾದಿಗಳು ಪರೆದಾಡುವ ಪರಿಸ್ಥಿತಿ ತಂದಿತ್ತು 19ನೇತಾರೀಖು ಎಣ್ಣಿ ಮಜ್ಜನ ಸೇವೆ.20ನೇತಾರೀಖು ಅಮವಾಸ್ಯೆ.21ನೇ ತಾರೀಖು ಮಂಗಳವಾರದಂದು 108ಕುಂಬಾಭಿಷೇಕ ಪೂಜೆಗಳು ಇದ್ದ ಕಾರಣ ಭಕ್ತಾದಿಗಳು ಜಿಗುಪ್ಸೆ ಯಿಂದ ಇದ್ದವರು.. ಹೆಚ್ ಡಿ.ಕೋಟೆ .ಭೀಮನ ಕೊಲ್ಲಿ,ಬ್ಯಾಲದ ಕುಪ್ಪೆ, ಸಂತೆ ಮಾರನಹಳ್ಳಿ, ಬೀರಂಬಳ್ಳಿ ಕಂದೆಗಾಲ,ಮಳವಳ್ಳಿ ,ಮೈಸೂರು.ಯಡಬೆಟ್ಟ,ಬೆಂಗಳೂರು, ಕನಕಪುರ, ರಾಮನಗರ ಹಾಗೂ ಹಲವೆಡೆ ಮಹದೇಶ್ವರ ದೇವಸ್ಥಾನ ಗಳಲ್ಲಿ ದರ್ಶನ ಪಡೆದು ನಿರತರಾಗಿದ್ದರು ಅದರಂತೆ ಮೈಸೂರು ಜಿಲ್ಲೆಯ ವರಕೊಡು ಮಹದೇಶ್ವರ ದೇವಾಲಯಕ್ಕೆ ಎಣ್ಣೆ ಮಜ್ಜನ ಸೇವೆ ಮತ್ತು ಮಹಾರುದ್ರಾಭಿಷೇಕ ಪೂಜೆಗೆ.ಭಕ್ತಾದಿಗಳ ಜನಸಾಗರವೇ ಹರಿದು ಬಂದಿತ್ತು ಸಂಜೆ ಆರು ಗಂಟೆಸಮಯದಲ್ಲಿ ಭಕ್ತಾದಿಗಳು ದೇವಾಲಯಕ್ಕೆ ತೆರಳುವಾಗ ದಾರಿ ಮಂಧ್ಯ ಎರಡು ಚಿರತೆಗಳು ಅಡ್ಡಗಟ್ಟಿ ನಿಂತ ಕ್ಷಣದಲ್ಲಿ ಆಟೋ ಗಳಲ್ಲಿ ಇದ್ದ ಭಕ್ತರು ಹೌಹಾರಿದರು.ಸುಮಾರು ಹತ್ತುನಿಮಿಷ ಕಾದರೂ ದಾರಿಬಿಡದೆ ನಿಂತಕಾರಣ ಭಕ್ತಾದಿಗಳು ವಾಪಾಸ್ ಬಂದು ಬೇರೆ ಮಾರ್ಗದಲ್ಲಿ ತಲುಪಿದರು ಸದ್ಯ ಯಾವುದೇ ಅಪಾಯವಾಗಿಲ್ಲಾ ಈಘಟನೆಯಿಂದ ಭಕ್ತರಲ್ಲಿ ಆತಂಕ ಮೂಡಿತ್ತು ಇಲ್ಲಿ ಮಹದೇಶ್ವರ ದೇವಾಲಯ ಕಾಡಿನ ತಪ್ಪಲಲ್ಲಿ ಇರುವುದರಿಂದ ಈರೀತಿ ನಡೆಯುವ ಸಾದ್ಯತೆ ಇರುತ್ತೆ ಲಾಕ್ ಡೌನ್ ಕರೋನ ಭೀಕರತೆಯಲ್ಲಿ ಕೂಡ ದೇವರ ದರ್ಶನ ಪಡೆದರು..

Related Articles

Back to top button
error: Content is protected !!
Close
Close