ಆಯುರ್ವೇದಆರೋಗ್ಯಟಿಪ್ಸ್

ಬಜೆ ಔಷಧೀಯ ಉಪಯೋಗ ಮತ್ತು ಗುಣಗಳನ್ನು ತಿಳಿಯಿರಿ

ಅಜ್ಜಿಯಂದಿಯರಿಗೆ ಚಿರಪರಿಚಿತ ಮೂಲಿಕೆ, ಸಣ್ಣ ಮಕ್ಕಳಿರುವ ಪ್ರತಿ ಮನೆಯಲ್ಲೂ ಬಜೆ ಇದ್ದೇ ಇರುತ್ತದೆ. ಇದರಲ್ಲಿ ‘ಅಕೊರಿನ್’ ತೈಲ ಇರುತ್ತದೆ. ಇದೊಂದು ಏಕದಳ ಸಸ್ಯ. ಕರ್ನಾಟಕದ ಅನೇಕ ಭಾಗಗಳಲ್ಲಿ ಇದನ್ನು ಗದ್ದೆಗಳಲ್ಲಿ ಸಾಗುವಳಿ ಮಾಡಲಾಗುತ್ತದೆ. ಬಜೆಗಿಡದಲ್ಲಿ ನೆಲದೊಳಗಿರುವ ಸುವಾಸನೆಯಿಂದ ಕೂಡಿದ ಶಿಘಾವೃಂತ ಅಥವಾ ಕಂದು ಇರುತ್ತದೆ. ಇದಕ್ಕೆ ಸಂಸ್ಕೃತದಲ್ಲಿ ವಚ ಮತ್ತು ಉಗ್ರಗಂಧ ಎಂದು, ಹಿಂದಿಯಲ್ಲಿ ಬಚ್ ಎಂದು, ಮರಾಠಿ ಮತ್ತು ಕೊಂಕಣಿಯಲ್ಲಿ ವೆಖಾಂಡ ಎನ್ನುತ್ತಾರೆ. ಹಾಗೆಯೇ ಗುಜರಾತಿ ಭಾಷೆಯಲ್ಲಿ ಗೊಡ್‍ವಚ್ ಎಂದು ಕರೆದರೆ ತೆಲುಗುವಿನಲ್ಲಿ ವಡಜ ಎಂದೂ ತಮಿಳರು ವಾಸುಬು ಎಂದು ಕರೆಯುವರು.#ಉಪಯೋಗ
ಕಹಿ ಹಾಗೂ ಸುವಾಸನಾಯುಕ್ತ ರುಚಿಯಲ್ಲಿ ಕಾರ, ತೀವ್ರವಾದ ಘಾಟು ವಾಸನೆಯುಳ್ಳ ಬಜೆ ಬೇರು. ಇದು ಧ್ವನಿ ಕಂಠಕ್ಕೆ ಹಿತಕಾರಿ. ಶ್ವಾಸನಾಳದ ದೋಷಗಳನ್ನು ಪರಿಹರಿಸಿ, ನಾಲಿಗೆಯನ್ನು ಚುರುಕುಗೊಳಿಸುತ್ತದೆ. ಜಡತ್ವವನ್ನು ಹೋಗಲಾಡಿಸಿ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ತೊದಲು ಉಗ್ಗು ನಿವಾರಣೆಗೆ. ಮಾತು ಸ್ಪಷ್ಟವಾಗಲು, ತ್ರಾಣ, ಬುದ್ಧಿ ಶಕ್ತಿ ಹೆಚ್ಚಳಕ್ಕೆ, ರೋಗ ನಿರೋಧಕತೆ ಹೆಚ್ಚಿಸಲು. ಗಂಟಲು ನೋವು ನಿವಾರಣೆಗೆ ಬಜೆಯನ್ನು ನೀರಿನಲ್ಲಿ ಇಲ್ಲವೆ ಎದೆ ಹಾಲಿನಲ್ಲಿ ತೇಯ್ದು ಗುಂಜಿಯಷ್ಟು ಗಂಧ ಸೇರಿಸಿ ಚಮಚಮ ಜೇನಿನೊಂದಿಗೆ ನೆಕ್ಕಿಸುವುದು.ನಾಲಿಗೆ ತೆಳ್ಳಗಾಗಲು: ಬಿಸಿ ನೀರಲ್ಲಿ ಬಜೆಯನ್ನು ತೇಯ್ದು ಆ ರಸವನ್ನು ಸರಾಗವಾಗಿ ಮಾತನಾಡಲಾರದ ಮಕ್ಕಳ ನಾಲಿಗೆಯ ಮೇಲೆ ಪ್ರತಿದಿನ ಮುಂಜಾನೆ ಸ್ವಲ್ಪ ಇಟ್ಟು ತಿಕ್ಕಿದರೆ ಕೆಲದಿನಗಳ ನಂತರ ನಾಲಿಗೆ ತೆಳ್ಳಗಾಗಿ ಮಾತನಾಡುವಾಗ ಉಚ್ಛಾರವು ಸ್ಪಷ್ಟವಾಗುತ್ತದೆ.ಶಿಶುಗಳ ಜಾಡ್ಯಕ್ಕೆ : ಶಿಶು ಬೆಚ್ಚಿದರೆ, ಬೆದರಿರೆ, ಸಣ್ಣಜ್ವರ ಬಂದರೆ ಅವು ನಿದ್ರಿಸುವ ಪೂರ್ವ ದಲ್ಲಿ ಅತಿ ತೆಳ್ಳಗಾದ ಬಜೆಯ ರಸವನ್ನು ಮೈಗೆ ನೇವರಿಸುವುದರಿಂದ ಪರಿಹಾರ ಕಾಣಬಹುದು.
ಆಯುರ್ವೇದದ ಪ್ರಕಾರ ಬಜೆಯನ್ನು ವಾಂತಿ ನಿವಾರಕ, ಜಠರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ, ಅಗ್ನಿಮಾಂದ್ಯ, ಅಜೀರ್ಣ, ಹೊಟ್ಟೆ ನೋವು, ನರಗಳ ದೌರ್ಬಲ್ಯಕ್ಕೆ, ಶ್ವಾಸನಾಳದ ಸೋಂಕಿಗೆ, ಮಕ್ಕಳಲ್ಲಿ ಅಮಶಂಕೆ. ಹಾವಿನ ಕಡಿತಕ್ಕೆ ಔಷಧಿಯಾಗಿಯೂ ಬಜೆಯನ್ನು ಉಪಯೋಗಿಸಲಾಗುವುದು.
ಬಜೆ ಸೇವಿಸುತ್ತಿದ್ದರೆ ಜಂತು ಹುಳ ಕ್ರಿಮಿತಯಾರಿಸುತ್ತಾರೆ ಪ್ರಾಣಿಗಳ ಆರೈಕೆಗೆ : ಉಪ್ಪು. ಸಕ್ಕರೆ, ಜೀರಿಗೆಯೊಂದಿಗೆ ಬೆಳ್ಳುಳ್ಳಿಯನ್ನು ಬೆರೆಸಿ ಬಜೆಯಿಂದ ತಯಾರಿಸಿದ ಮಿಶ್ರಣವನ್ನು ಕುದುರೆಗಳಿಗೆ ನೀಡುವುದರಿಂದ ಅವುಗಳ ಶಕ್ತಿವರ್ಧಿಸುವುದು.
ಬಜೆಯ ಎಲೆಗೆಳಿಂದ ತಯಾರಿಸಿದ ಹಸಿರಾದ ತೈಲವು ದನ-ಕರಗಳ ಕಾಲು ಬಾಯಿ (ವಡೆ) ರೋಗಕ್ಕೆ ರಾಮಬಾಣ. ರೇಷ್ಮೆ, ಜರತಾರಿಯಂತಹ ದುಬಾರಿ ಬಟ್ಟೆಗಳು ಹಾಳಾಗದಂತೆ ರಕ್ಷಿಸಲು ಬಜೆಯನ್ನು ಉಪಯೋಗಿಸಲಾಗುವುದು. ಕ್ಯಾಲಿಮಿಸ್ ಎಂಬ ತೈಲ ಪರಿಮಳಯುಕ್ತವಾಗಿದ್ದು, ಇದನ್ನು ಬಜೆಯ ಕಾಂಡಿದಿಂದ ತಯಾರಿಸುತ್ತಾರೆ

ಸಂಗ್ರಹ ಮಾಹಿತಿ

Related Articles

Back to top button
error: Content is protected !!
Close
Close