ಆಯುರ್ವೇದಆರೋಗ್ಯಟಿಪ್ಸ್

ಕೊರೋನಾಗೆ ಆಯುರ್ವೇದದ ಚಿಕಿತ್ಸೆ ಯಶಸ್ವಿ” ಯಾವ ಗಿಡ ಮದ್ದು..?

“ಕೊರೋನಾಗೆ ಆಯುರ್ವೇದದ ಚಿಕಿತ್ಸೆ ಯಶಸ್ವಿ”

“ಕಾಡು ಹಂದಿಯಂತಹ ಪ್ರಾಣಿಗೆ ತಿಳಿದಿರುವುದು ನಮಗೆ ತಿಳಿಯುದಿಲ್ಲವೇ”ಕಾಡುಹಂದಿಗಳು ಚಿಗುರೊಡೆಯುತ್ತಿರುವ ಕೊನ್ನೆರು ಬೀಜಗಳನ್ನು ಕಿತ್ತು ತಿನ್ನುವುದಕ್ಕಾಗಿ ನೆಲವನ್ನು ಅಗೆದಿರುವುದನ್ನು ನೋಡುತ್ತಿದ್ದವು ಯಾವುದೋ ಗೆಡ್ಡೆಯನ್ನು ತಿನ್ನಲು ಇರಬಹುದೇನೋ ಎಂದು ನಿರ್ಲಕ್ಷಿಸಿದ್ದೇವು.ಮೊನ್ನೆ ಮೊನ್ನೆ ಗಿರಿಧರ ಕಜೆಯವರು ಕಂಡು ಹಿಡಿದ ಕೊರೋನಾಗೆ ಔಷಧಿಗೆ ಕೊನ್ನೇರು ಬೀಜವೇ ಮೂಲವೆಂದು ತಿಳಿದಾಗ ಆಶ್ಚರ್ಯವಾಯಿತು.
ಸುಭಾಷ್ ಪಾಳೇಕರ್ ಅವರು ಕಳೆಯೇ ನಮ್ಮ ಭೂಮಿಯ ಸತ್ವ ಎಂದು ಹೇಳಿದ್ದು ಕಣ್ಮುಂದೆ ಹಾದು ಹೋಯಿತು.ವೈರಲ್ ಫೀವರ್ ಗೆ ಕೊನ್ನೇರು ಬೀಜವೇ ಎಂಬುದು ಕಾಡಂದಿಗೆ ತಿಳಿದಿದೆ ಎಂದಾಯಿತು.
ಪ್ರಾಣಿ ಪ್ರಪಂಚ ಪ್ರಕೃತಿಯನ್ನು ಅದರ ತಲ್ಲಣಗಳನ್ನು ಅರಿತು ಅದರೊಂದಿಗೆ ಬದುಕುವ ಕಲೆಯನ್ನು ಕಲಿತಿವೆ.
ಮನುಷ್ಯರು ಮಾತ್ರ ಪ್ರಕೃತಿಗೆ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದಾನೆ.ಒಂದು ಸಣ್ಣ ಕರೋನಾ ವೈರಾಣು ಮನುಷ್ಯನ ಅಹಂಕಾರ,ಅಸ್ತಿತ್ವವನ್ನು ಪ್ರಶ್ನಿಸುತ್ತಿದೆ ಪ್ರಕೃತಿಗಿಂತ ನೀನು ದೊಡ್ಡವನಲ್ಲ ಎಂದು ಜ್ಞಾಪಿಸುತ್ತಿದೆ.
ಕಡೆಗೆ ನಾನು ಹೇಳಬೇಕಾದದ್ದು ಇಷ್ಟೇ ಯಾವುದೇ ರೋಗ ಗುಣವಾಗುವುದು ಬಹುಪಾಲು ಮನುಷ್ಯನ ಮಾನಸಿಕ ಶಕ್ತಿಯ ಮೇಲೆ.
ವಂದಿಮಾಗದರು ಮನುಷ್ಯನ ಮನೋಬಲವನ್ನು ಕುಗ್ಗಿಸಿ ಇದಕ್ಕೆ ಕರೋನಾಗೆ ಔಷಧವಿಲ್ಲ ಎಂದು ಸಮಸ್ಯೆಯನ್ನು ಹಿಗ್ಗಿಸಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡುತ್ತಿವೆ.ಕರೊನಾ ಎಂಬ ಕಾಯಿಲೆ ಮನುಷ್ಯ ಕುಲಕ್ಕೆ ಇದೆ ಮೊದಲನೆಯದು ಅಲ್ಲ, ಕೊನೆಯದೂ ಅಲ್ಲ ಕೊರೋನಾಗೆ ಕೇವಲ 180ರೂಪಾಯಿಯಲ್ಲಿ ಆಯುರ್ವೇದದಿಂದ ಚಿಕಿತ್ಸೆ ಸಾಧ್ಯ ಎಂದು ತೋರಿಸಿದ್ದಾರೆ.(ಗಿರಿಧರ್ ಕಜೆ ನೇತೃತ್ವದಲ್ಲಿ) ಎಲ್ಲಾ ಖಾಯಿಲೆಗಳಿಂದಲೂ ಸಾವು ಸಂಭವಿಸುವುದು ಸರ್ವೇಸಾಮಾನ್ಯ.
ಆದರೆ ಸಾವಿನ ಪ್ರಕರಣಗಳನ್ನೆ ಬಿಂಬಿಸುವುದಕ್ಕಿಂತ ಯಶಸ್ವಿಯಾಗಿರುವ ಪ್ರಕರಣಗಳ ಉದಾಹರಣೆ ಮೂಲಕ ಮಾನವ ಕುಲಕ್ಕೆ ಮಾನಸಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕಾಗಿದೆ.
ಆಯುರ್ವೇದ ಚಿಕಿತ್ಸೆ ಮನೆಮಾತಾಗಬೇಕು
ಕರೋನದಂತಹ ಹತ್ತಾರು ಕಾಯಿಲೆಗಳು ಬಂದರು ಅದನ್ನು ಎದುರಿಸುವ ಮನೋಬಲ,ದೈಹಿಕ ಬಲ ತುಂಬುವ ಕೆಲಸ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ಆಗಬೇಕಾಗಿದೆ.ಸತ್ತವರನ್ನು ಕಸದಂತೆ ಎಸೆಯುವ, ರೋಗ ಬಂದವರನ್ನು ಸಮಾಜ ಕಂಟಕರಂತೆ ನೋಡುವ ಮನೋಧರ್ಮ ಬದಲಾಗಬೇಕಿದೆ.ದಿನದ ಆಹಾರಕ್ಕಿಂತ ಹೆಚ್ಚೇನು ಹಾಗೂ ಮಕ್ಕಳು ಮೊಮ್ಮಕ್ಕಳಿಗೂ ಕೊಡಿಡಬೇಕೆಂದು ಬಯಸದ ಪ್ರಾಣಿ ಪ್ರಪಂಚವೇ ನಮಗೆ ಮಾದರಿಯಾಗಿದೆ. ಪ್ರಕೃತಿಯೊಂದಿಗೆ ಬದುಕುವ ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಮನಸ್ಥಿತಿಯನ್ನು ನಾವು ಕಲಿಯಬೇಕಿದೆ.
ಇದನ್ನೇ ನಮ್ಮ ಹಿರಿಯರಾದ ಸಾಧುಸಂತರು ಹೇಳಿದ್ದು ನಾವು ಅನುಕರಿಸಬೇಕಿದೆ ಅಷ್ಟೇ.

ಸಂಗ್ರಹ ಮಾಹಿತಿ

Related Articles

Leave a Reply

Your email address will not be published. Required fields are marked *

Back to top button
error: Content is protected !!
Close
Close