ಕನಕಪುರದಲ್ಲಿ ಸ್ವಯಂ ಪ್ರೇರಿತ ಲಾಕ್ ಡೌನ್ !ಜುಲೈ 1 ರವರೆಗೆ.

ಪ್ರಪಂಚದಾದ್ಯಂತ ಕೊರೋನ ಮಹಾ ಮಾರಿ ಹರಡಿ ಜನತೆಯಲ್ಲಿ ನಡುಕ ಹೆಬ್ಬಿಸಿತು ಅದಕ್ಕೆ ತಕ್ಕಂತೆ ಸರ್ಕಾರ ಹಲವಾರು ಕ್ರಮವನ್ನು ಜಾರಿಗೊಳಿಸಿ ಕೊರೋನ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದೆ ಆದರೆ ಜನತೆಯ ನಿರ್ಲಕ್ಷ್ಯ ದಿಂದ ದಿನದಿಂದ ದಿನಕ್ಕೆ ಪ್ರಕರಣ ಗಳು ಹೆಚ್ಚುತ್ತಿರುವುದು ಅಘಾತಕರ ಸಂಗತಿ ಆದರೆ ಇದು ನಗರವಲ್ಲದೇ ಹಳ್ಳಿಗಾಡಿನಲ್ಲಿಯೂ ಕೂಡ ಪ್ರಸರಿಸಿದೆ ಈಗ ರಾಮನಗರ ಜಿಲ್ಲೆಯ ಕನಕಪುರ ರೆಡ್ ಜೋನ್ ನಲ್ಲಿದೆ ಆದಕಾರಣ ತಾಲ್ಲೂಕಿನ ಜನತೆಯ ಹಿತದೃಷ್ಟಿಯಿಂದ
ಇಂದು ನಡೆಸಿದ ಸಭೆಯಲ್ಲಿ ಕನಕಪುರ ನಗರಾದ್ಯಂತ ಹರಡುತ್ತಿರುವ ಕೊರೋನ ವೈರಸ್ ತಡೆಗಟ್ಟಲು ಸಲುವಾಗಿ ಸಾರ್ವಜನಿಕರ ಸ್ವಯಂ ಪ್ರೇರಿತವಾಗಿ ನಾಳೆಯಿಂದ ಜುಲೈ 1 ರ ವರಗೆ ಕನಕಪುರ ಟೌನ್ ಲಾಕ್ ಡೌನ್ ಮಾಡಲಾಗಿದ್ದು ಬಟ್ಟೆ, ಚಿನ್ನ ಹಾಗೂ ವಿವಿಧ ವಾಣಿಜ್ಯ ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲು ಆದೇಶ ಮಾಡಲಾಗಿದ್ದು , ದಿನಸಿ ಹಾಗೂ ಹಾಲಿನ ಅಂಗಡಿಗಳನ್ನು ಬೆಳ್ಳಿಗೆ 6 ರಿಂದ 11 ಗಂಟೆಗೆ ತೆರೆಯಲು ಹಾಗೂ ಮೆಡಿಕಲ್ ಶಾಪ್ 24 ಗಂಟೆಗಳ ಕಾಲ ತೆರೆಯಲು ಅನುಮತಿ ನೀಡಲಾಗಿದ್ದು ಆದ್ದರಿಂದ ಟೌನ್ ಹಾಗೂ ಕನಕಪುರ ತಾಲ್ಲೂಕಿನ ಅಕ್ಕ ಪಕ್ಕದ ಹಳ್ಳಿಯ ಜನರು ಯಾವುದೇ ಕಾರಣಕ್ಕೂ ಬರಬಾರದು ಎಂದು ವಿನಂತಿ…. ಈ ಕೊರೋನ ವೈರಸ್ ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂದು
ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕರು ವಿನಂತಿ ಮಾಡಿಕೊಂಡಿದ್ದಾರೆ ಆದರಿಂದ ಕನಕಪುರದ ಜನತೆಯುಸಹಕರಿಸಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ನಿಮ್ಮ ಕುಟುಂಬ ನಿಮ್ಮ ಕೈಯಲ್ಲಿ
ಸಂಗ್ರಹ ಮಾಹಿತಿ