ಉಪಯುಕ್ತ ಮಾಹಿತಿಸುದ್ದಿ

ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಮೂರುದಿನ ದೇವರ ದರ್ಶನ ನಿಷೇಧಕ್ಕೆ ಕಾರಣ ಏನು..?

ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಮೂರುದಿನ ದೇವರ ದರ್ಶನ ನಿಷೇಧಕ್ಕೆ ಕಾರಣ ಏನು..?

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶ್ರೀಮಲೆಮಹದೇಶ್ವರ ಬೆಟ್ಟದಲ್ಲಿ ಮಲೆಮಹದೇಶ್ವರ ಸ್ವಾಮಿಯವರಿಗೆ ಎಣ್ಣೆಮಜ್ಜನ ಹಾಗೂ ದಿನಾಂಕ20_06_2020ಮತ್ತು 21_06_2020 ಅಮವಾಸ್ಯೆ ದಿನದ ಲ್ಲಿ ಶ್ರೀಮಲೆಮಹದೇಶ್ವರ ಪುಣ್ಯ ಕ್ಷೇತ್ರಕ್ಕೆ ಭಕ್ತಾದಿಗಳು ರಾಜ್ಯದ ಎಲ್ಲಾಭಾಗಗಳಿಂದ ದರ್ಶನಕ್ಕೆ ಬರುತ್ತಾರೆ ಈಗ ಬರುವ ಭಕ್ತಾದಿಗಳ ಸಂಖ್ಯೆಗಿಂತ ಹತ್ತುಪಟ್ಟು ಹೆಚ್ಚುಬರುವ ಸಾದ್ಯತೆ ಇರುತ್ತದೆ ವಿಶೇಷವಾಗಿ 19ನೇ ತಾರೀಕು ಎಣ್ಣೆಮಜ್ಜನ ಸೇವೆ ಇರುವುದರಿಂದ ಶನಿವಾರ ಭಾನುವಾರ ರಜೆ ಇರುವುದರಿಂದ ತುಂಬಾ ನಿರೀಕ್ಷೆಯಲ್ಲಿ ಭಕ್ತಾದಿಗಳು ಬರುವ ಉದ್ದೇಶದಿಂದ ಈ ದಿನಾಂಕಗಳಲ್ಲಿ ದೇವಸ್ಥಾನದ ದೇವರ ದರ್ಶನವನ್ನು ವ್ಯವಸ್ಥಿತವಾಗಿ ದೇವರ ದರ್ಶನ ಮಾಡಿಸಲು ಕಷ್ಟಸಾಧ್ಯ ಆಗಿರುವುದರಿಂದ ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳಿಗೆ ನಿರ್ವಹಣೆ ಮಾಡಲು ಆಗದೆ ಇರುವುದರಿಂದ ಭಕ್ತಾದಿಗಳಿಗೆ ಕಡ್ಡಾಯವಾಗಿ ದರ್ಶನವನ್ನು ನಿಷೇಧಿಸಲಾಗಿದೆ
ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಹನೂರು ತಾಲೂಕು ಶ್ರೀಕ್ಷೇತ್ರ ಮಲೆಮಹದೇಶ್ವರ ಸ್ವಾಮಿ ದೇವಾಲಯ ಹಾಗೂ ಪ್ರಾಧಿಕಾರ ಆವರಣದಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಸಹಕರಿಸಿ ಹಾಗೂ ತಮ್ಮೆಲ್ಲರಿಗೂ ಕೂಡ ಮಲೆಮಹದೇಶ್ವರ ಸಕಲ ಸಂಪತ್ತುಗಳನ್ನು ಕರುಣಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಹಾಗೂ ನಿಮ್ಮ ಆರೋಗ್ಯದ ದೃಷ್ಟಿಯಿಂದ ನೀವು ಈ ಅಮಾವಾಸ್ಯೆಯಲ್ಲಿ ಶ್ರೀಕ್ಷೇತ್ರಕ್ಕೆ ಬರುವುದನ್ನು ದಯವಿಟ್ಟು ತಪ್ಪಿಸಿ ಎಂದು ತಮ್ಮಲ್ಲಿ ಕಳಕಳಿಯ ಮನವಿ ಹಾಗೂ ಇದನ್ನು ನಿಮ್ಮ ಅಕ್ಕ ಪಕ್ಕದವರಿಗೂ ಹಾಗೂ ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮ ಸಂಬಂಧಿಗಳಿಗೆ ಒಂದು ವಿಷಯವನ್ನು ತಿಳಿಸಿ ಸಹಕರಿಸಬೇಕಾಗಿ ತಮ್ಮಲ್ಲಿ ಮನವಿ. ಮಲೆಮಹದೇಶ್ವರನ ಪಾದಕ್ಕೆ ಒಂದು ಸಾರಿ ಉಘೇ ಎನ್ನಿ

ಸಂಗ್ರಹ ಮಾಹಿತಿ

Related Articles

Leave a Reply

Your email address will not be published. Required fields are marked *

Back to top button
error: Content is protected !!
Close
Close