ಆಯುರ್ವೇದಆರೋಗ್ಯಟಿಪ್ಸ್

ಕೆಂದಾಳಿ ಎಳೆನೀರು ಬಳಸುವುದರಿಂದ ಇಷ್ಟೆಲ್ಲಾ ಉಪಯೋಗ ಇದೆಯಾ..?

ಏನೇ ಖಾಯಿಲೆ ಬಂದರೂ ಮನೆಮದ್ದಾಗಿ ಉಪಯೋಗಿಸುವ ಮೊದಲನೆಯ ಔಷಧಿಯೇ ಎಳೆನೀರು. ಆದರೆ ಸಾಮಾನ್ಯ ಎಳೆನೀರಿಗಿಂತ ತುಂಬಾ ವಿಶೇಷ ವಾದ ಎಳನೀರು ಕೆಂದಾಳಿ ಧಾರ್ಮಿಕ ಕಾರ್ಯಗಳಿಂದ ಹಿಡಿದು,ಮಾನವನ ದೇಹದಾರೋಗ್ಯ ಕಾಪಾಡಿಕೊಳ್ಳುವಲ್ಲಿವರೆಗೂ ಕೆಂದಾಳಿ ಎಳೆನೀರಿನ ಪಾತ್ರ ತುಂಬಾನೇ ಇದೆ.

ಬಿಸಿಲಿನ ಬೇಗೆಗೆ ದೇಹವನ್ನ ತಂಪಾಗಿರುಸುವಲ್ಲಿ ಎಳೆನೀರಿನ ಪಾತ್ರ ಬಹುಮಹತ್ವದ್ದಾಗಿದೆ. ಅದರಲ್ಲೂ ಕೆಂದಾಳಿ ಎಳೆನೀರುತುಂಬಾನೇ ಒಳ್ಳೆದು. ಕೆಂದಾಳಿ ಎಳೆನೀರಲ್ಲಿ ಔಷಧೀಯ ಮಹತ್ವವುಳ್ಳ ಖನಿಜಾಂಶಗಳು ಹೇರಳವಾಗಿದೆ.

ಕೆಂದಾಳಿಯ ಎಳನೀರು ಔಷಧೀಯ ಗುಣಗಳು-

  1. ಕೆಂದಾಳಿಯ ನೀರನ್ನು ಕುಡಿಯುವುದರಿಂದ ದೇಹಕ್ಕೆ ಚೈತನ್ಯವನ್ನ ಸಿಗುವುದಲ್ಲದೆ ರೋಗನಿರೋಧಕ ಶಕ್ತಿ ಯು ಹೆಚ್ಚುತ್ತದೆ.
  2. ಕೆಂದಾಳಿ ಎಳೆನೀರನ್ನು ಸೇವಿಸುತ್ತಾ ಬಂದದ್ದೆ ಆದಲ್ಲಿ ,ದೇಹದ ಚರ್ಮ ಸುಕ್ಕುಗಟ್ಟುವುದನ್ನ ತಡೆಯಬಹುದು.ದೇಹ ಸದಾ ನುಣುಪಾದ ಚರ್ಮದಿಂದ ಕೂಡಿರುತ್ತದೆ.
  3. ಸರ್ಪಸುತ್ತಾದಲ್ಲಿ ಕೆಂದಾಳಿ ಎಳೆನೀರಿನ ಸಿಪ್ಪೆಯನ್ನು ತೆಗದು ಜಜ್ಜಿ ಅದರ ರಸದಿಂದ ಕಾನಕಜೆ ಮರದ ಕೆತ್ತೆಯನ್ನು ಅರೆದು ಹಚ್ಚಿದರೆ ಉರಿಕಡಿಮೆಯಾಗಿ ಬೇಗನೆ ವಾಸಿಯಾಗುವುದು.
  4. ಹೆಂಗಸರಲ್ಲಿ ಮುಟ್ಟಿನ ಸಮಸ್ಯೆ ತುಂಬಾನೆ ಇರುತ್ತದೆ.ಹೊಟ್ಟೆನೋವು,ನಿಶ್ಯಕ್ತಿ, ವಾಂತಿ…ಇಂತಹಾ ಸಂದರ್ಭದಲ್ಲಿ ಕೆಂದಾಳಿ ಎಳೆನೀರಿನ ಸೇವನೆ ಉತ್ತಮ.
  5. ಚಿಕನ್ ಫಾಕ್ಸ್ ಆದಾಗ ಕೆಂದಾಳಿ ಎಳೆನೀರನ್ನು ಆದಷ್ಟು ಕುಡಿಯಬೇಕು.ಇದರಿಂದ ದೇಹ ತಂಪಾಗಿರುತ್ತದೆ.
  6. ಕೈ ಮದ್ದುಗೆ ಇದನ್ನು ಬಳಸುವುದರಿಂದ ಸಂಪೂರ್ಣವಾಗಿ ಶಮನಗೊಳ್ಳುತ್ತದೆ.
  7. ಇದನ್ನು ನಿಶಕ್ತ ರೋಗಿಗಳಿಗೆ ಕೊಡುವುದರಿಂದ ಸಂಜೀವಿನಿ ಯಂತೆ ಕೆಲಸಮಾಡುತ್ತದೆ.
  8. ಇದನ್ನು ಬಳಸುವುದರಿಂದ ಕೂದಲು.ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಒಟ್ಟಾರೆ ಕೆಂದಾಳಿ ಎಳೆನೀರು..ಆರೋಗ್ಯದ ಕಣಜ,ಹೀಗೆ ಅನೇಕ ರೋಗಗಳಿಗೆ ಕೆಂದಾಳಿ ಎಳೆನೀರಿನ ಸೇವನೆ ತುಂಬಾನೆ ಒಳ್ಳೆದು.

ಸಂಗ್ರಹ ಮಾಹಿತಿ

Related Articles

Back to top button
error: Content is protected !!
Close
Close