ಆಯುರ್ವೇದಆರೋಗ್ಯಟಿಪ್ಸ್

ಕೇದಗೆ,ಕೇತಕಿ ,ತಾಳೆಯ ಔಷಧೀಯ ಗುಣಗಳು ಮತ್ತು ಉಪಯೋಗಗಳು ನಿಮಗೆ ಗೊತ್ತಾ.?

ಕೇದಗೆ.

Pandanus odoratissimus.

ಕೇದಗೆ, ಕೇತಕಿ ತಾಳೆ..ಮುಂತಾದ ಹೆಸರು ಇರುವ ಇದನ್ನು ನಮ್ಮ ಕಡೆ ಕೇಜ್ಗೆ ಗರಿ, ತಾಳೆ ಗರಿ ಎಂದು ಕರೆಯುತ್ತೇವೆ.
( ಇದಕ್ಕೆ ಗರಿಹೂವು ಎಂಬ ಹೆಸರೂ ಇದ್ದು ಮುದ್ದಣ ಕೂಡಾ ಗರಿ ಹೂವು ಎಂದು ಕರೆದಿರುವುದು ಅದ್ಭುತ ರಾಮಾಯಣದಲ್ಲಿ ಬರುತ್ತದೆ)ಬಾಲ್ಯದಲ್ಲಿ ಇದು ಅಪರೂಪದ ಹೂವೇ ಆಗಿತ್ತು. ಶಿವ ಪೂಜೆಗೆ ಸಲ್ಲದು ಎಂದು ಹೇಳುವ ಈ ಹೂಗಳನ್ನು ನಮ್ಮ ಮನೆಗಳಲ್ಲಿ ಸೊಸೆಯಂದಿರು ಮುಡಿಯುವಂತಿರಲಿಲ್ಲ. ಚಿಕ್ಕಂದಿನಲ್ಲಿ ಮಕ್ಕಳು ಮತ್ತು ಅತ್ತೆ( ಅಪ್ಪನ ತಂಗಿ) ಮಾತ್ರ ಇವನ್ನು ಮುಡಿಯಲು ಅವಕಾಶ ಇತ್ತು. ನಮ್ಮ ಊರಿನ ಹಳ್ಳದ ದಂಡೆಯಲ್ಲಿ ಮತ್ತು ತಾಳೆ ಹಳ್ಳದಲ್ಲಿ ನೋಡಿದ್ದೆ.
ನಂತರ ಇದನ್ನು ನೋಡಿದ್ದು ಟ್ರಕ್ಕಿಂಗ್ ಹೋಗಿದ್ದಾಗ ಸಕಲೇಶಪುರದ ಬಳಿ. ದೊಡ್ಡ ಹಸಿರು ಹಿಂಡಿಲು ಎಷ್ಟು ಹುಡುಕಿದರೂ ಒಂದೂ ಹಳದಿ ತೆನೆ ಕಾಣಲಿಲ್ಲ.ಹಳ್ಳ, ನದಿ, ಸಮುದ್ರದ ದಂಡೆಗಳಲ್ಲಿ, ತೇವಾಂಶ ಇರುವ ಜಾಗಗಳಲ್ಲಿ ಕಂಡು ಬರುವ ದೊಡ್ಡ ಪೊದರು ಸಸ್ಯ ಇದು. ನೀಳವಾದ ಎಲೆಗಳ ಅಂಚಿನಲ್ಲಿ ಮುಳ್ಳುಗಳಿದ್ದು ಸುವಾಸನೆ ಭರಿತ ಹಳದಿ ತೆನೆ ಬಿಡುತ್ತದೆ ಆ ತೆನೆಯೇ ಇದರ ಹೂವು.
ಮುಳ್ಳೆಲೆಗಳು ಸುವಾಸನೆಯನ್ನು ಸೂಸುವ ಸುಮಗಳಿಗೆ ಕಾವಲಾಗಿ ನಿಂತಿರುವಂತೆ ಭಾಸವಾಯಿತು” ಎಂಬ ವರ್ಣನೆ ಬರುತ್ತದೆ ಬಿ. ಜಿ.ಎಲ್. ಸ್ವಾಮಿಯವರ ‘ ಹಸುರು ಹೊನ್ನು’ ಪುಸ್ತಕದಲ್ಲಿ.
ಕೇದಗೆಯಲ್ಲಿ ಹಲವು ಪ್ರಭೇದಗಳಿದ್ದು ಕೆಲವನ್ನು ಅಲಂಕಾರ ಸಸ್ಯಗಳಾಗಿ ಬೆಳೆಸುತ್ತಾರೆ.
ಕೇದಗೆ ಹಿಂಡಿಲಿನಲ್ಲಿ ಹಾವು ಹೆಚ್ಚಾಗಿರುತ್ತವೆ ಎಂಬ ನಂಬಿಕೆಯೂ ಇದೆ.

ಉಪಯೋಗ:)೧ಕೇದಗೆಯ ಗರಿ, ಹೂವು, ಬೇರುಗಳನ್ನು ಆಹಾರ, ಅಲಂಕಾರ, ಔಷಧ ಬಳಕೆಯಲ್ಲಿ ಉಪಯೋಗಿಸುತ್ತಾರೆ.

೨)ಇದರ ಮೊಗ್ಗಿನ ತುದಿಯನ್ನು ಎಲೆಕೋಸಿನ ರೀತಿಯಲ್ಲಿ ತರಕಾರಿಯಾಗಿ ಬಳಸುತ್ತಾರಂತೆ.
ಫಿಲಿಫೈನ್ಸ್ ದ್ವೀಪದ ನಿವಾಸಿಗಳು ಇದರ ಎಲೆಗಳನ್ನು ಆಹಾರವಾಗಿ ಬಳಸುತ್ತಾರಂತೆ.
೩)ಕೇವುಡ ಅತ್ತರು’ ಎಂಬ ಹೆಸರಿನ ಇದರ ತೈಲವನ್ನು ಅಗರಬತ್ತಿ, ಸೋಪು ತಯಾರಿಸಲು, ಸಿಹಿ ತಿಂಡಿ ಮತ್ತು ಪಾನೀಯಗಳಿಗೆ ಸುವಾಸನೆ ಬರಿಸಲು ಬಳಸುತ್ತಾರೆ.
ಅಲ್ಲದೆ ಕುಷ್ಠ, ಸಿಡುಬು ಮುಂತಾದ ಚರ್ಮದ ಸಮಸ್ಯೆಯಲ್ಲಿ ಬಳಕೆಯಾಗುತ್ತದೆ.
೪)ತಲೆನೋವು, ಶ್ವಾಸಕೋಶದ ತೊಂದರೆಯಲ್ಲೂ ಬಳಸುತ್ತಾರೆ.
೫)ಕೇಸರಗಳಿಂದ ತಯಾರಿಸಿದ ಔಷಧಿಯು ಕಿವಿನೋವು, ತಲೆ ನೋವು, ರಕ್ತ ಸಂಬಂಧವಾದ ಕಾಯಿಲೆಗಳಲ್ಲಿ ಬಳಕೆಯಾಗುತ್ತದೆ.
ಹೂಗೊಂಚಲಿನ ಸಾರವನ್ನು ಸಂಧಿವಾತಕ್ಕೂ ಬಳಸುತ್ತಾರೆ.
೬)ಬೇರನ್ನು ಅರೆದು ಸಿಡುಬುಗಳಿಗೆ ಲೇಪಿಸಿದರೆ ಉಪಶಮನವಾಗುತ್ತದೆ.
೭)ಬೇರಿನ ಕಷಾಯವನ್ನು ಕಾಮಾಲೆಗೂ
ಬೇರನ್ನು ತೇಯ್ದು ಹಾವು ಕಡಿತಕ್ಕೆ ಮದ್ದಾಗಿ ಬಳಸುತ್ತಾರೆ.ಬೀಜಗಳ ಕಷಾಯವನ್ನು ಹೊಟ್ಟೆ ನೋವು ಮತ್ತು ಕರುಳಿನ ತೊಂದರೆ ನಿವಾರಿಸಲು ಬಳಸುತ್ತಾರೆ.

೮)ಇದರ ಗರಿಗಳಿಂದ ಗುಡಿಸಲಿನ ಛಾವಣಿ, ಚಾಪೆ, ಹಗ್ಗ, ಬುಟ್ಟಿ, ಛತ್ರಿ, ಒಂದು ಬಗೆಯ ಒರಟು ಕಾಗದ ತಯಾರಿಸಲಾಗುತ್ತದೆ.
೯)ಎಲೆಗಳ ನಾರಿನಿಂದ ಚೀಲಗಳನ್ನು ತಯಾರಿಸುತ್ತಾರೆ.
ಭಾರತ ಮತ್ತು ಬರ್ಮಾ ದೇಶಗಳಲ್ಲಿ ಇದರ ಹೂಗಳನ್ನು ಕೇಶಾಲಂಕಾರಕ್ಕೆ ಉಪಯೋಗಿಸುತ್ತಾರೆ.
ಒಟ್ಟಾರೆ ಎಲೆ, ಹೂವು, ಬೇರು ಎಲ್ಲವೂ ಬಳಕೆಗೆ ಬರುವ ಉಪಯುಕ್ತ ಸಸ್ಯವಾಗಿದೆ.

ಸಂಗ್ರಹ ಮಾಹಿತಿ

Related Articles

Back to top button
error: Content is protected !!
Close
Close