ಆಯುರ್ವೇದಆರೋಗ್ಯಟಿಪ್ಸ್

ಅಂಜೂರ ಹಣ್ಣಿನ ಔಷಧೀಯ ಗುಣಗಳು ಮತ್ತು ಉಪಯೋಗಗಳು ನಿಮಗೆ ಗೊತ್ತಾ..?

ಅಂಜೂರಹಣ್ಣಿನ ಗಿಡ,ಅಂಜೀರ್,ಅಂಜೂರಮು, ಅಂಜುರಂ,ಧೂಮರ್,ಬಹಳ ಹೆಸರುಗಳಿಂದ ಕರೆಯಲ್ಪಡುತ್ತದೆ.ಮತ್ತುಅಂಜೂರದ ಗಿಡಗಳನ್ನು ವಾಣಿಜ್ಯಬೆಳೆಯಾಗಿ ಬೆಳೆದು,ಅಧಿಕ ಲಾಭ ಗಳಿಸುತ್ತಿದ್ದಾರೆ. ಕೆಂಪು ಮಣ್ಣು ಅಂಜೂರ ಕೃಷಿಗೆ ಹೇಳಿ ಮಾಡಿಸಿದ ಭೂಮಿ.ಹೊಲ ತೋಟಗಳ ಬದಿಗಳ ಮೇಲೆ ಸಹಾ ಬೆಳೆಸುವುದಲ್ಲದೆ,ಹಳ್ಳಿಗಳಲ್ಲಿ ಹಣ್ಣಿಗಾಗಿ ಮನೆಯ ಹಿತ್ತಲಲ್ಲೂ ಬೆಳೆಸುತ್ತಾರೆ.
ಅಂಜೂರವನ್ನು ನಮ್ಮ ಭಾರತ ದೇಶವಲ್ಲದೆ, ಆಫ್ಘಾನಿಸ್ತಾನ್,ನೇಪಾಳ,ಮಲೇಷಿಯಾ,ಇಂಡೋನೇಷಿಯಾ,ಬರ್ಮಾ,ಶ್ರೀಲಂಕಾ ದೇಶಗಳಲ್ಲೂ ಹೇರಳವಾಗಿ ಬೆಳೆಯುತ್ತಾರೆ.
ಅಂಜೂರದಲ್ಲಿ ಅಧಿಕವಾಗಿ ಕ್ಯಾಲರಿ,ಪ್ರೊಟೀನ್,ಪೊಟಾಸಿಯಂ,ಕ್ಯಾಲ್ಸಿಯಂ, ತಾಮ್ರ,ಕಬ್ಬಿಣಾಂಶ,ವಿಟಮಿನ್ ಗಳು,ಪೋಷಕಾಂಶ
ಗಳಿಂದ ಕೂಡಿದ್ದು,ಔಷಧಿಗಳ ಭಂಡಾರವೆ ತುಂಬಿದೆ.
1)ಅಂಜೂರ ಹಣ್ಣು ದೇಹಕ್ಕೆ ತುಂಬಾ ತಂಪು ನೀಡುತ್ತೆ.ಇದರ ಸೇವನೆಯಿಂದ, ಕಫ ಹಾಗೂ ರಕ್ತಪಿತ್ತವನ್ನು ದೂರ ಮಾಡುತ್ತದೆ
2)ಶ್ವಾಸಕೋಶದಲ್ಲಿ ಸೇರಿಕೊಂಡಿರುವ ಕಫವನ್ನು
ಕರಗಿಸಿ ಹೊರ ಬರುವಂತೆ ಮಾಡುತ್ತೆ.
3)ಅಂಜೂರವನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರಕೋಶದಲ್ಲಿನ ಕಲ್ಲು ಕರಗುತ್ತೆ.ದೇಹದಲ್ಲಿ ರಕ್ತ ಶುದ್ಧಿಯಾಗುವುದಲ್ಲದೆ
ಅಧಿಕ ರಕ್ತದೊತ್ತಡ ನಿವಾರಣೆಯಾಗುತ್ತೆ.
4)ಅಂಜೂರದ ಹಣ್ಣಿನ ಕಷಾಯ ಮಾಡಿ ಬಾಯಿ
ಮುಕ್ಕಳಿಸುತ್ತಿದ್ದರೆ, ಗಂಟಲು ನೋವು, ಬಾಯಿ ಹುಣ್ಣು, ಬಾಯಿ ದುರ್ವಾಸನೆ,ವಸಡು ನೋವು ನಿವಾರಣೆಯಾಗುತ್ತೆ.
5)ಅಂಜೂರದ ಎಲೆಗಳನ್ನು ತಂದು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಬೆಳಿಗ್ಗೆ ಸಂಜೆ ಸೇವಿಸುತ್ತಿದ್ದರೆ,
ಮಧುಮೇಹ ಅತೋಟಿಗೆ ಬರುವುದಲ್ಲದೆ .ಮೂತ್ರ ಕೋಶದಲ್ಲಿನ ಕಲ್ಲನ್ನು ಸಹಾ ಕರಗಿಸುತ್ತದೆ.

6)ಕೆಮ್ಮು, ಅಸ್ತಮಾ ಗುಣವಾಗುತ್ತದೆ.ಕಣ್ಣಿನ ದೃಷ್ಟಿ ಹೆಚ್ಚುತ್ತೆ.ದೇಹದಲ್ಲಿನ ಮೂಳೆಗಳು
ಬಲಿಷ್ಠವಾಗುತ್ತವೆ.

7)ಮಕ್ಕಳಿಲ್ಲದ ದಂಪತಿಗಳು ಅಂಜೂರದ ಹಣ್ಣನ್ನು ಸೇವಿಸುತ್ತಿದ್ದರೆ,ಸಂತಾನ ಪ್ರಾಪ್ತಿಯಾಗುತ್ತೆ.

8)ಎರಡು ಅಥವಾ ಮೂರು ಒಣಗಿದ ಅಂಜೂರವನ್ನು ರಾತ್ರಿ ನೀರಲ್ಲಿ ನೆನಸಿಟ್ಟು,ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದು,ಒಂದು ಲೋಟ ಹಸುವಿನ ಹಾಲು ಕುಡಿದರೆ
ಲೈಂಗಿಕ ಬಲಹೀನತೆ ದೂರವಾಗುತ್ತೆ.
9)ಮೂರ್ನಾಲ್ಕು ಅಂಜೂರದ ಹಣ್ಣು,50 ಗ್ರಾಂ ಒಣದ್ರಾಕ್ಷಿ ಹಸುವಿನ ಹಾಲಿನಲ್ಲಿ ಚೆನ್ನಾಗಿ ಬೇಯಿಸಿ
ಸೇವಿಸುವುದರಿಂದ, ದೇಹದಲ್ಲಿ ರಕ್ತಶುದ್ದಿಯಾಗಿ,
ರಕ್ತ ವೃದ್ಧಿಯಾಗುತ್ತೆ.ಹೃದಯವನ್ನು ಆರೋಗ್ಯ
ವಾಗಿಡುತ್ತೆ.
10)ಅಂಜೂರದಲ್ಲಿ ನಾರಿನಾಂಶ ಹೇರಳವಾಗಿದ್ದು, ನಿಯಮಿತವಾಗಿ ಸೇವಿಸುತ್ತಿದ್ದರೆ,ಮಲಬದ್ಧತೆ ನಿವಾರಣೆಯಾಗುತ್ತೆ.
11)ಅಂಜೂರದ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳು ದೂರವಾಗಿ, ದೇಹಕ್ಕೆ ಹೊಸ
ಚೈತನ್ಯ ನೀಡುತ್ತೆ.ಥೈರಾಯ್ಡ್ ಸಮಸ್ಯೆ ಸಹಾ
ದೂರವಾಗುತ್ತೆ.

12)ಮುಖದಲ್ಲಿ ಮೊಡವೆಗಳು ನಿವಾರಣೆಯಾಗಿ, ಮುಖದಲ್ಲಿ ಕಾಂತಿ ಹೆಚ್ಚಾಗುತ್ತೆ.
13)ಅಂಜೂರದ ಹಣ್ಣುಗಳು ನಿಯಮಿತವಾಗಿ
ಸೇವಿಸುತ್ತಿದ್ದರೆ ರಕ್ತಹೀನತೆ ದೂರವಾಗಿ,ಸ್ತ್ರೀಯರಲ್ಲಿ
ಅಂಡಾಣು,ಪುರುಷರಲ್ಲಿ ವೀರ್ಯಾಣು ವೃದ್ಧಿಸಿ ಸಂತಾನ ಪ್ರಾಪ್ತಿಯಾಗುತ್ತೆ.
14)ಅಂಜೂರ ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗಿ ಮಧುಮೇಹ ಅತೋಟಿಗೆ
ಬರುತ್ತೆ.ರಕ್ತದಲ್ಲಿನ ಗ್ಲುಕೋಸ್ ನಿಯಂತ್ರಿಸುತ್ತದೆ..
ಅಂಜೂರವನ್ನು ಪೌಷ್ಠಿಕಾಂಶಗಳ ಗಣಿ ಅಂದರೆ ತಪ್ಪಾಗಲಾರದು.

ಸಂಗ್ರಹ ಮಾಹಿತಿ

Related Articles

Back to top button
error: Content is protected !!
Close
Close