ದೇವಾಲಯಗಳುಧಾರ್ಮಿಕ

ಭಕ್ತಕುಲ ಕೋಟಿಗೆ ಮಲೆ ಮಹದೇಶ್ವರ ಸ್ವಾಮಿಯವರ ಅಭಿಷೇಕ ನೇರ ದರ್ಶನ ಹೇಗೆ..?

ಭಕ್ತಕುಲ ಕೋಟಿಗೆ ಮಲೆ ಮಹದೇಶ್ವರ ಸ್ವಾಮಿಯವರ ಅಭಿಷೇಕ ನೇರ ದರ್ಶನ

ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 27.05.2020 ರಿಂದ ಎಪ್ಪತ್ತೇಳು ಮಲೆಗಳ ಒಡೆಯ ಮಹದೇಶ್ವರ ಸ್ವಾಮಿಯವರ ಪೂಜಾಕಾರ್ಯಗಳು ಅನ್ ಲೈನ್ ಸೇವೆಯ ಮುಖಾಂತರ ಭಕ್ತಾದಿಗಳಿಗೆ ಅವಕಾಶ ಮಾಡಿಕೊಟ್ಟಿದೆ ಆದರಿಂದ www.mmhillstemple.com ನಲ್ಲಿ ಪ್ರತಿನಿತ್ಯ ಉತ್ತರಾಜಮ್ಮನ ಕಂದ,ವ್ಯಾಘ್ರನಂದರ ಶಿಷ್ಯ, ಮಲೆ ಮಹದೇಶ್ವರ ಸ್ವಾಮಿಗೆ ಬೆಳಗಿನ ಜಾವ 04:00ರಿಂದ 05:30 ವರೆಗೆ ಹಾಗೂ ಸಂಜೆ 06:30 ರಿಂದ 07:45 ಗಂಟೆಯವರೆಗೆ ನಡೆಯುವ ಅಭಿಷೇಕ, ಪೂಜೆ,ಸೇವೆಗಳನ್ನು ಮಲೆ ಮಹದೇಶ್ವರ ನ ಭಕ್ತಾದಿಗಳು ಮಾಡಿಸಿ ಈ ಸಮಯದಲ್ಲಿ ಶ್ರೀ ಸ್ವಾಮಿಯವರ ದರ್ಶನ ನೇರವಾಗಿ ಪಡೆಯಬಹುದು

ಭಕ್ತರು ಅನ್ ಲೈನ್ ಸೇವೆಯ ಮುಖಾಂತರ ಬಯಸುವ ಸೇವೆಗಳು
1) ಪಂಚ ಕಳಸ ಸಮೇತವಾಗಿ ನವರತ್ನ ಕೀರಿಟ ಧಾರಣೆಯ ಸೇವೆಗಾಗಿ. 600 ರೂಪಾಯಿಗಳು.

2) ಏಕವಾರ ರುದ್ರಾಭಿಷೇಕ ಸಮೇತ ನವರತ್ನ ಕೀರಿಟ ಧಾರಣೆ ಸೇವೆಗಾಗಿ. 750 ರೂಪಾಯಿಗಳು.
3)ಏಕವಾರ ರುದ್ರಾಭಿಷೇಕ 300 ರೂಪಾಯಿಗಳು.
4)ಶಿವಾ ಅಷ್ಟೊತ್ತರ ಬಿಲ್ವಾರ್ಚನೆ.300 ರೂಪಾಯಿಗಳು.
5) ಪಂಚಾಮೃತ ಅಭಿಷೇಕ 300 ರೂಪಾಯಿಗಳು. ಹಾಗೂ

ವಿದ್ಯುತ್ ದೀಪಾಲಂಕರ ಸೇವೆಗಳು,

1)1ಗಂಟೆಯ ದೀಪಾಲಂಕಾರ ಸೇವೆಗಾಗಿ 1200 ರುಪಾಯಿ

2)1/2 ಗಂಟೆಯ ದೀಪಾಲಂಕಾರ ಸೇವೆಗಾಗಿ. 750 ರುಪಾಯಿ.

3)1/4ಗಂಟೆಯ ದೀಪ ಅಲಂಕಾರ ಸೇವೆಗೆ 500 ರುಪಾಯಿ
ಮಲೆ ಮಹದೇಶ್ವರ ಭಕ್ತರ ಅನುಕೂಲದ ವ್ಯವಸ್ಥೆಯನ್ನು ಕೊವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಅಭಿವೃದ್ಧಿ ಪ್ರಾಧಿಕಾರವು ಮಾಡಿರುತ್ತದೆ ಆದ್ದರಿಂದ ಮಲೆ ಮಹದೇಶ್ವರ ನ ಭಕ್ತಾದಿಗಳು ಸದುಪಯೋಗ ಪಡೆದುಕೊಳ್ಳಿ

ಉಘೇ…ಉಘೇ…ಉಘೇ…
ಉತ್ತರದೇಶದಯ್ಯಾ ಉಘೇ ಮರಿದೇವಾ ಉಘೇ ಮಾಯಕಾರ ಮುದ್ದು ಮಾದಪ್ಪನ ಪಾದಕ್ಕೆ ಉಘೇ..

ಸಂಗ್ರಹ ಮಾಹಿತಿ

Related Articles

2 Comments

  1. ಮಹದೇಶ್ವರ ಸ್ವಾಮಿ ವಿಶೇಷ ಪೂಜೆ ಮಾಡಬೇಕು
    ಮಹದೇಶ್ವರ ಸ್ವಾಮಿ ಯ ಆನ್‌ಲೈನ್ ಮೂಲಕ ಮಹದೇಶ್ವರ ಸ್ವಾಮಿ ಪೂಜೆ ಮಾಡಿಸಬೇಕು

    1. ಅದರಲ್ಲಿ ವೆಬ್ ಸೈಟ್ ಇದೆ ಲಾಗಿನ್ ಮಾಡಿ ಅದರಲ್ಲಿ ಬುಕ್ ಮಾಡಿ

Back to top button
error: Content is protected !!
Close
Close