ಕಥೆಗಳುಸಾಧಕರುಸುದ್ದಿ

ದೊಡ್ಡಣ್ಣ.ನವರು ಒಂದು ವಿಡಿಯೋ ನೋಡಿ ಯಾರಿಗೆ ನಾನು ನಿಮ್ಮಾ ಅಭಿಮಾನಿ ಎಂದು ಹೇಳಿದ್ರು.?

ಅರೇನಳ್ಳಿ ಶಿವಶಂಕರ್ ಧರ್ಮೇಂದ್ರ ಕುಮಾರ್ ರವರು ಸಿವಿಲ್ ಇಂಜಿನಿಯರ್ ಹಾಗೂ ಇತಿಹಾಸಕಾರರು ಅವರಿಗೆ ಒಮ್ಮೆ ಚಿತ್ರ ನಟ ಹಾಸ್ಯ ದಿಗ್ಗಜ ದೊಡ್ಡಣನವರು ಪೋನ್ ಮಾಡಿದ್ದರು

ಫೋನು ಕಿರುಗುಟ್ಟಿತು…ಹಲೋ…ಧರ್ಮೇಂದ್ರೂ…ಹೇಳಿ…ನಾನು ದೊಡ್ಡಣ್ಣ…

ಅದೇ ಚಿರಪರಿಚಿತ ದನಿ… ಅಹ್… ಸಾರ್ ನಮಸ್ತೆ… ನಾನು ನಿಮ್ ಅಭಿಮಾನಿ… ಹೇಳಿದೆ ಯೇ… ತೆಗೀರಿ ಅತ್ಲಾಗೇ… ಒಂದ್ ವೀಡಿಯೋ ನೋಡಿದೆ… ಈಗ ನಾನ್ ನಿಮ್ ಫ್ಯಾನು… ಎಲ್ಲಿದೀರಿ… ದೊಡ್ಡಣ್ಣ ಕೇಳಿದ್ರು…

ಬೇತಾಳದ ಥರ ಬೆಂಗಳೂರಿನ ಬೀದಿ ಬೀದಿ ಅಲೀತಾ ಇದೀನಿ ಅಂದೆ…

ಬನ್ನಿ… ಚಾಮರಾಜಪೇಟೆಗೆ…ಸ್ವಲ್ಪ ಹರಟೆ ಹೊಡೆಯೋಣ…

ಸೀದಾ ಗಾಡಿ ತಿರುಗಿಸಿದೆ… ಅದು ಚಲನಚಿತ್ರ ಕಲಾವಿದರ ಸಂಘದ ಕಟ್ಟಡ… ಹಿರಿಯ ಕಲಾವಿದ ದೊಡ್ಡಣ್ಣ ಕಲಾವಿದರ ಸಂಘದ ಅಧ್ಯಕ್ಷರು…

ಬನ್ನೀ… ಬನ್ನೀ… ಧರ್ಮೇಂದ್ರೂ… ಏನ್ರೀ… ನೀವೂ… ಎಲ್ ಇಟ್ಟಿದ್ರಿ ಇವೆಲ್ಲ… ಮಾತಿಗಾರಂಭಿಸಿದರು…

ನಾಡು ಬೆಳಗಿದ ನಾಲ್ವಡಿ ಪ್ರಭುಗಳಿಂದ ಹಿಡಿದು ಮನ್ಮಹಾರಾಜ ಜಯಚಾಮರಾಜೇಂದ್ರ ಒಡೆಯರ ತನಕ… ಅಣ್ಣಾವರಿಂದ ಅಂಬಿ ಅಣ್ಣನ ತನಕ… ಈಗ ಅವರು ಅಭಿನಯಿಸುತ್ತಿರುವ “ರಾಜಾ ವೀರಮದಕರಿ ನಾಯಕ” ಚಿತ್ರದ ಕಥೆಯವರೆಗೂ ಎಲ್ಲರೂ ಬಂದು ಹೋದರು…

ಮೈಸೂರು ಸಂಸ್ಥಾನದ ಇತಿಹಾಸಕ್ಕೆ ಸಂಬಂಧಿಸಿದಂತೆ ಅಪಾರವಾದ ಮಾಹಿತಿ ಹೊಂದಿರುವ ದೊಡ್ಡಣ್ಣ ನಾಲ್ವಡಿ ಪ್ರಭುಗಳನ್ನು ಕುರಿತೇ ಘಂಟೆಗಟ್ಟಲೆ ಮಾತನಾಡಿದರು…

ಅವರ ಮನೆಯಿಂದಲೇ ತಂದಿದ್ದ ನುಚ್ಚಿನುಂಡೆ ಪ್ರೀತಿಯಿಂದ ಬಡಿಸಿ ತಿನಿಸಿದರು…

ನಾಲ್ಕನೇ ಮಹಡಿಯಲ್ಲಿರುವ ರೆಬೆಲ್ ಸ್ಟಾರ್ ರ ಭವ್ಯವಾದ ಚಿತ್ರದ ಮುಂದೆ ಕ್ಷಣಕಾಲ ನಿಂತು ಅವರಿಂದ ಬೀಳ್ಕೊಂಡು ಹೊರಬಂದೆ

ಸಂಗ್ರಹ ಮಾಹಿತಿ

Related Articles

Back to top button
error: Content is protected !!
Close
Close