ಆಯುರ್ವೇದಆರೋಗ್ಯಟಿಪ್ಸ್

ನೆಗ್ಗಲು ಮುಳ್ಳು.(ನಗ್ನು ಮುಳ್ಳು) ಹಲವು ರೋಗಗಳಿಗೆ ರಾಮಬಾಣ

ನೆಗ್ಗಲು ಮುಳ್ಳು.(ನಗ್ನು ಮುಳ್ಳು) ಉರಿ ಮೂತ್ರಕ್ಕೆ ರಾಮಬಾಣನೆಗ್ಗಲು ಮುಳ್ಳುಗಳಲ್ಲಿ ಎರಡು ವಿಧ ನೆಗ್ಗಲು ಮುಳ್ಳು.ಆನೆ ನೆಗ್ಗಲು ಮುಳ್ಳು ಎಂದು
ಹೊಲಗಳಲ್ಲಿ, ಬದುಗಳಲ್ಲಿ, ಬಯಲಿನಲ್ಲಿ ಬೆಳೆದು ಹರಡುವ ಈ ಗಿಡ ತನ್ನಲ್ಲಿನ ಮುಳ್ಳಿನಿಂದ ತಾತ್ಸಾರಕ್ಕೆ ಒಳಗಾಗಿದೆಯಾದರೂ ಅದೇ ಮುಳ್ಳಿನಲ್ಲಿರುವ ಔಷಧೀಯ ಗುಣಗಳಿಂದಾಗಿ ಮಹತ್ತ್ವ ಕೂಡಾ ಪಡೆದಿದೆ.

ಸಾಮಾನ್ಯವಾಗಿ ಉಷ್ಣ ವಾತಾವರಣದಲ್ಲಿ ಬೆಳೆಯುವ ಇದು ಭಾರತವೂ ಸೇರಿದಂತೆ ದಕ್ಷಿಣ ಏಷ್ಯಾ, ದಕ್ಷಿಣ ಯುರೋಪ್, ಆಫ್ರಿಕಾ, ಆಸ್ಟ್ರೇಲಿಯಾ ಗಳಲ್ಲಿ ಕಂಡುಬರುತ್ತದೆ.ಇದರ ವೈಜ್ಞಾನಿಕ ಹೆಸರು tribulus terrestris.ಇಂಗ್ಲಿಷ್ ನಲ್ಲಿ ಪಂಕ್ಚರ್ ವೈನ್, ಸಂಸ್ಕೃತದಲ್ಲಿ ಗೋಕ್ಷುರಾ, ಕನ್ನಡದಲ್ಲಿ ನೆಗ್ಗಿನ ಮುಳ್ಳು, ನೆಗ್ಗಲು ಮುಳ್ಳಿನ ಗಿಡ ಎಂಬ ಹೆಸರಿದೆ. ನಾವು ನೆಗ್ಗಲುಗಡಲೆ ಮುಳ್ಳಿನ ಗಿಡ ಎನ್ನುತ್ತೇವೆ.

ಕಡಲೆಗಿಡದ ಎಲೆಯನ್ನು ಹೋಲುವ ಇದರ ಕುಡಿಯನ್ನು ಸಾಂಬಾರು ಮಾಡಲು ಬಳಸುತ್ತಾರೆ, ಮುಳ್ಳು ಬಲಿಯುವ ಮೊದಲು ದನಗಳಿಗೂ ತಿನ್ನಲು ಹಾಕುತ್ತಾರೆ. ಇದರಿಂದ ಹೆಚ್ಚು ಹಾಲು ಉತ್ಪಾದನೆ ಯಾಗುತ್ತದೆ ಇದು ಪೊದೆಯಂತೆ ಬೆಳೆದು ಹಳದಿ ಹೂವುಗಳನ್ನು ನೋಡುವುದೆ ಬಲುಚೆಂದವಾಗಿರುತ್ತದೆ.

ಕಡಲೆ ಕಾಳಿನಂತಿರುವ ಇದರ ಕಾಯಿಯಲ್ಲಿರುವ ಮುಳ್ಳು ಚುಚ್ಚಿದರೆ ವಿಪರೀತ ನೋವು ಕೆಲವು ದಿನಗಳವರೆಗೂ ಇರುತ್ತದೆ. ನಾವು ಚಿಕ್ಕಂದಿನಲ್ಲಿ ಮುಳ್ಳು ತುಳಿದಾಗ ನೋವು ಇರುವ ಜಾಗಕ್ಕೆ ಬೆಲ್ಲವನ್ನು ದೀಪದಲ್ಲಿ ಸುಟ್ಟು ಇಡುತ್ತಿದ್ದರು ಅಥವಾ ಎಕ್ಕದ ಹಾಲು ಹಾಕಿ ಅದರ ಅಗರನ್ನು ಮೆತ್ತುತ್ತಿದ್ದರು.
ಇದರ ಎಲೆ, ಕಾಯಿ ಅಥವಾ ಮುಳ್ಳು, ಬೇರುಗಳು ಔಷಧೀಯ ಗುಣಗಳಿಂದ ಕೂಡಿದೆ ಕಿಡ್ನಿ , ಕರುಳೂ ಸೇರಿದಂತೆ ಶರೀರದ ಎಲ್ಲಾ ಅಂಗಗಳಿಗೂ ಶಕ್ತಿ ನೀಡಿ ಕಾರ್ಯಕ್ಷಮತೆ ಹೆಚ್ಚಿಸುತ್ತದೆ.

ಇದರ ಎಲೆಗಳ ಸೇವನೆ ರಕ್ತ ಹೆಚ್ಚಿಸಲು ಸಹಕಾರಿ. ಅಲ್ಲದೆ ರಕ್ತ ಸುರಿಯುವ ಗಾಯಗಳಿಗೆ ಎಲೆಗಳ ಪೇಸ್ಟ್ ಹಚ್ಚಬಹುದು. ಜನರಿಗೆ ಮಾತ್ರವಲ್ಲದೆ ದನಗಳ ಗಾಯಗಳಿಗೂ ಸಹ ಹಚ್ಚಬಹುದು.ಉರಿ ಮೂತ್ರಕ್ಕೆ ಇದರ ಮುಳ್ಳಿನ ಪುಡಿಯನ್ನು ಕಲ್ಲು ಸಕ್ಕರೆ ಮತ್ತು ಹಾಲಿನ ಜೊತೆ ಸೇವಿಸಿದರೆ ಕಡಿಮೆಯಾಗುತ್ತದೆ.
ಫಂಗಸ್ ಮತ್ತು ಬ್ಯಾಕ್ಟೀರಿಯಾದಿಂದಾಗುವ ಕಾಯಿಲೆಯನ್ನು ಗುಣಪಡಿಸಲು ಇದರ ಪುಡಿ ಬಳಸುತ್ತಾರೆ.

ಶಕ್ತಿ ವರ್ಧಕವಾಗಿರುವ ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನರಗಳದೌರ್ಬಲ್ಯವನ್ನು ಸಮನ ಮಾಡುತ್ತದೆ.ಹಾರ್ಮೋನ್ ಗಳ ಅಸಮತೋಲನೆಯನ್ನು ಸರಿಪಡಿಸಲು ಸಹಕಾರಿ.
ಮೂತ್ರ ನಾಳದ ಸೋಂಕು, ಮೂತ್ರ ಕೋಶದ ಕಲ್ಲು ಮೂತ್ರ ಪಿಂಡ ವೈಫಲ್ಯ ನಿವಾರಿಸಲು ಬಳಕೆಯಾಗುತ್ತದೆ.

ಇದರ ಮುಳ್ಳಿನ ಪುಡಿಯನ್ನು ಶುಂಠಿ ಜೊತೆ ಸೇರಿಸಿ ಕಷಾಯ ಮಾಡಿ ಸೇವಿಸುವುದರಿಂದ ಮಂಡಿ ನೋವು ಕಡಿಮೆಯಾಗುತ್ತದೆ.ಮುಳ್ಳಿನ ಪುಡಿಯನ್ನು ಜೇನು ತುಪ್ಪದೊಂದಿಗೆ ಸೇವಿಸುವುದರಿಂದ ಕೆಮ್ಮುಕಡಿಮೆಯಾಗುತ್ತದೆ.ಬಂಜೆ ತನದ ನಿವಾರಣೆ
ಮಾಂಸಖಂಡಗಳ ಕೊಬ್ಬು ಕರಗಿಸಲು ಬಳಕೆಯಾಗುತ್ತದೆ.

ವಿಸೂ : ಗರ್ಭಿಣಿಯರು, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆ ಇರುವವರು ಇದರ ಉತ್ಪನ್ನಗಳ ಔಷಧಿ ಸೇವಿಸುವಂತಿಲ್ಲ.

ಸಂಗ್ರಹ_ಮಾಹಿತಿ.

Related Articles

Back to top button
error: Content is protected !!
Close
Close