ಸುದ್ದಿ

ಜಗಳಗಂಟಿ ಮರ ಹೆಸರು ವಿಚಿತ್ರವಾದರು ಹಿನ್ನೆಲೆ ಮಾತ್ರ ರೋಚಕ

ಯಾರ ಮನೆಯಲ್ಲಿ ಇದರ ಸಮೂಲ ಇರುತ್ತದೆಯೊ ಅವರ ಮನೆ ಕಥೆ ಅಷ್ಟೆ… ಅಂದರೆ ಎಲ್ಲ ಸದಸ್ಯರ ನಡುವೆ ಕಲಹ ಏರ್ಪಟ್ಟು ಎಲ್ಲಿಗೆ ನಿಲ್ಲುವುದೊ ಎಂದು ಅಂದಾಜು ಸಿಗದಂತೆ ಇದರ ಎಪೆಕ್ಟ್…

ಮಹಾಭಾರತದಂತಃ ದಾಯಾದಿಗಳ ಕಲಹಕ್ಕೆ ಇದರ ಹೆಸರನ್ನು ಹಳ್ಳಿಯ ಜನ ತಳುಕಿ ಹಾಕಿದುಂಟು.. ಅಷ್ಟು ಪ್ರಭಾವವಿದೆ ಇ ಗಿಡಕ್ಕೆ ತಾಂತ್ರಿಕ ವಿದ್ಯೆಯಿಂದ ರಾಜರುಗಳ ಕಾಲದಲ್ಲಿ ಶತ್ರುಗಳ ಉಚ್ಚಾಟನೆಗೆ ಇದನ್ನು ಬಳಸುತ್ತಿದ್ದರಂತೆ ಮಾಂತ್ರಿಕ ತಾಂತ್ರಿಕ ವಿದ್ಯೆಯಲ್ಲಿ ಕಟುಕವಿದ್ವೇಶಿಣಿ.. ಗಂಟುಮುಖಿ ಎಂಬ ಇತ್ತಾದಿ ಹೆಸರುಗಳಿವೆ ಇದಕ್ಕೆ ಅರಣ್ಯದಲ್ಲಿ ಕಟ್ಟಿಗೆ ಕಡಿದು ಹೊತ್ತೊಯ್ಯುವವರು ಅಪ್ಪಿತಪ್ಪಿಯೂ ಇದನ್ನ ಒಯ್ದರೆ ಅವರ ಕಥೆ ಅಷ್ಟೆಯಂತೆ ಮನೆಯಲ್ಲಿ ನಿತ್ಯ ಕಲಹವಂತೆ.. Diospyros montana Roxb ಇದರ ವೈಜ್ಞಾನಿಕ ಹೆಸರು.

ತನ್ನ ಬಳಿ ಬರುವವರಿಗೆ ಹುಷಾರ್ ಎನ್ನುತ್ತೆ ಈ ಮರ ಮುಳ್ಳು ಹಂದಿ ಮುಳ್ಳುಗಳು ಮನೆಯಲ್ಲಿ ಚುಚ್ಚಿದರೆ, ಸಿಕ್ಕಿದ್ದರೆ ಸಹಾ ಜಗಳ ಆಗುತ್ತದೆ, ಮನೆ ಮನಸು ಮುರಿಯುತ್ತವೆ ಎನ್ನುವುದು ಗೊತ್ತು ಆದರೆ ಎಷ್ಟರ ಮಟ್ಟಿಗೆ ಸತ್ಯ ಸುಳ್ಳು ಎನ್ನುವುದು ಮಾತ್ರ ಗೊತ್ತಿಲ್ಲ, ಈಗಂತೂ ಎಲ್ಲರಿಗೂ ಮುಂಗೋಪ ಮಾತು ಕಾರಣವೇ ಇಲ್ಲದೆ ಕಲಹ.. ಇವೆಲ್ಲಾ ಬೇಕಿಲ್ಲ ಎಂದು ಅನಿಸುತ್ತದೆ ನನಗೆ ಆದರೆ ನಾನಂತೂ ಈ ತರಹದ ಮರದ ಹೆಸರು ಕೇಳಿಲ್ಲ ನೋಡಿಲ್ಲ.. ಪ್ರಕೃತಿ ವಿಸ್ಮಯ ಈ 🌲 ಪರಿಸರ, ಅದನ್ನು ಸೃಷ್ಟಿ ಮಾಡುವ ಶಕ್ತಿ ನಮಗಿಲ್ಲ ಎಂದ ಮೇಲೆ ನಾಶ ಮಾಡುವ ಹಕ್ಕೂ ನಮಗೆ ಇಲ್ಲ…

ಇದು ಮರಗೆಲಸ ಮಾಡುವ ವರ ಜಾಣ್ಮೆ ಮತ್ತು ಸಾಮಾನ್ಯ ಜನರ ಮುಡನ೦ಬಿಕೆ ಅಥವಾ …
ಪಾಪ ಹೊಂದಾಣಿಕೆ ಇಲ್ಲದಿರೋ ಮನುಷ್ಯ ಇದರ ಮೇಲೆ ಗೂಬೆ ಕೂರಿಸಿದಾನಾ ಗೊತ್ತಿಲ್ಲಾ ನಮ್ಮ ಊರಿನಲ್ಲಿ ತುಂಬಾ ಮರಗಳು ಇದ್ದವು ರಸ್ತೆ ಅಗಲೀಕರಣಕ್ಕೆ ಬಲಿಯಾದವು. ಆದರೆ ಈ ಮರವನ್ನು ಕಡಿಯಲು ಹೆದರುತ್ತಾರೆ ನಮ್ಮ ಅಮ್ಮನು ಹೇಳ್ತಿದ್ರು….. ಆ ಸೌದೆ ಹೊಲೆಗೆ ಹಾಕಿದ್ರೆ ಜಗಳ ಆಗುತ್ತದೆ ಮನೆಗೆ ತರಬೇಡ ಅಂತ… ಚಿಕ್ಕಮಕ್ಕಳಲ್ಲಿ ನಮಗೆ ಒಂತರಾ ನೋಡೋಣ ಅನಿಸೋದು…

ಮನೆಗೆ ತರ್ತಿದ್ದೆ, ಯಾವ ಜಗಳನೂ ಇರಲಿಲ್ಲ,, ಯಾವುದೂ ಇಲ್ಲ.. ಆದರೆ ನಮ್ಮ ಹಿರಿಯರು ಮಾತ್ರ ನಂಬಿಕೆಯಿಂದ ಹೇಳಿದ್ದಾರೆ. ಆದರೆ ಇದರ ಹಣ್ಣು ಮತ್ತು ಕಾಯಿಗಳು ನೋಡಲು ಚಂದ ಕಂಡರು ತಿನ್ನಲು ಯೋಗ್ಯವಲ್ಲಾ.. ಹಿರಿಯರು ಮೂಡನಂಬಿಕೆ ಸುಳ್ಳು ಏನಲ್ಲ… ಬೇರೆ ಏನೋ ರೀಸನ್ ಇರುತ್ತದೆ… ನಮಗೆ ಗೊತ್ತಿಲ್ಲ ಅಷ್ಟೇ..

Related Articles

Back to top button
error: Content is protected !!
Close
Close